ಯೋಜನೆಯೊಂದನ್ನು ಆಯ್ಕೆ ಮಾಡಿ

** ನೀವಾಗಿ ರದ್ದು ಮಾಡುವವರೆಗೂ, ನಿಮ್ಮ ಚಂದಾದಾರಿಕೆಯು ಅದರ ಅವಧಿಯ ಕೊನೆಯ ದಿನದಂದು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ.
** ಎಲ್ಲ ಯೋಜನೆಗಳ ದರಗಳು GST ಯನ್ನು ಒಳಗೊಂಡಿದೆ.

Secure Payments By

ನಮ್ಮ ಕುರಿತು

ಕಳೆದ ಏಳು ದಶಕಗಳಿಂದ ‘ಪ್ರಜಾವಾಣಿ’ ಕನ್ನಡಿಗರ ಧ್ವನಿಯಾಗಿದೆ. ನಾಡಿನ ಜನರ ಅತ್ಯಂತ ನೆಚ್ಚಿನ ದಿನಪತ್ರಿಕೆ ಎನಿಸಿದೆ. ಗಲ್ಲಿಯಿಂದ ದಿಲ್ಲಿಯವರೆಗಿನ ಎಲ್ಲ ಆಗು–ಹೋಗುಗಳ ತಾಜಾ ವರ್ತಮಾನವನ್ನು ತಿಳಿದುಕೊಳ್ಳಲು ಓದುಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿಯೂ ‘ಪ್ರಜಾವಾಣಿ’ ಹೊರಹೊಮ್ಮಿದೆ. ದೇಶದ ತಾಂತ್ರಿಕ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪತ್ರಿಕೆಯು ನಾಡಿನ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಮಹತ್ವದ ವಿಚಾರಗಳಲ್ಲಿ ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ‘ಪ್ರಜಾವಾಣಿ’, ತನ್ನ ನೇರ, ನಿಷ್ಠುರ ಸಂಪಾದಕೀಯಗಳಿಗೂ ಹೆಸರುವಾಸಿ. ಆಳ–ಅಗಲದ ವಿಶ್ಲೇಷಣೆಗಳು, ತನಿಖಾ ವರದಿಗಳು ‘ಪ್ರಜಾವಾಣಿ’ಯ ಹೆಗ್ಗುರುತುಗಳು. ಪತ್ರಿಕೆಯಲ್ಲಿ ಪ್ರಮುಖ ವರ್ತಮಾನಗಳ ಜತೆಗಿನ ಆನ್‌ಲೈನ್ ಕೊಂಡಿಗಳು ಓದುಗರನ್ನು ಮುದ್ರಣ ಮಾಧ್ಯಮದಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತವೆ. ವೆಬ್‌ಸೈಟ್‌ನಲ್ಲಿರುವ ಅತ್ಯುತ್ಕೃಷ್ಟ ಗುಣಮಟ್ಟದ ವಿಡಿಯೊಗಳು ಹಾಗೂ ಪಾಡ್‌ಕಾಸ್ಟ್‌ಗಳು ನೋಡುಗರಿಗೆ/ಕೇಳುಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಹೊಸತನಕ್ಕೆ ಒಡ್ಡಿಕೊಳ್ಳಲು ಪತ್ರಿಕೆ ಎಂದಿಗೂ ಹಿಂಜರಿದಿಲ್ಲ. ಹೊಸ ವಿನ್ಯಾಸ, ನವ ಅಂಕಣಗಳಿಂದ ಓದುಗರಿಗೆ ಸದಾ ಹೊಸತನ್ನು ನೀಡುವ ದೊಡ್ಡ ಪರಂಪರೆಯೇ ‘ಪ್ರಜಾವಾಣಿ’ಗೆ ಇದೆ. ಇದೆಲ್ಲದರ ನಡುವೆ ಪತ್ರಿಕೆಯು ಸಮಾಜದ ಒಳಿತಿಗೆ ಶ್ರಮಿಸುವ ತನ್ನ ಮುಖ್ಯ ಧ್ಯೇಯಕ್ಕೆ ಮತ್ತಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. ಒಳ್ಳೆಯ ಪತ್ರಿಕೋದ್ಯಮದ ಮೂಲಕ ಸಮಾಜದ ಒಳಿತಿನ ಗುರಿಯತ್ತ ಸಾಗುತ್ತಿರುವ ‘ಪ್ರಜಾವಾಣಿ’ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಅದಕ್ಕಾಗಿಯೇ ‘ಕನ್ನಡ ಅಂದ್ರೆ ಪ್ರಜಾವಾಣಿ, ಪ್ರಜಾವಾಣಿ ಅಂದ್ರೆ ಕನ್ನಡ’ ಎಂದು ಪತ್ರಿಕೆ ನಾಡಿನ ತುಂಬಾ ಮಾನ್ಯತೆ ಗಳಿಸಿದೆ.

ಪ್ರಯೋಜನಗಳು

ಪತ್ರಿಕೆಯ ಪ್ರತಿರೂಪ

ಪ್ರಜಾವಾಣಿಯ ಪ್ರತಿಯನ್ನು ಯಾವುದೇ ಸಮಯದಲ್ಲಿ ಎಲ್ಲಿದ್ದರೂ ಓದಿರಿ

ವಿಡಿಯೊಗಳು ಮತ್ತು ಪಾಡ್‌ಕಾಸ್ಟ್‌ಗಳು

ಪತ್ರಿಕೆಗಿಂತಲೂ ಹೆಚ್ಚು ವಿವರವಾಗಿ ತಿಳಿಯಲು ವಿಡಿಯೊ ವೀಕ್ಷಿಸಿ ಅಥವಾ ಪಾಡ್‌ಕಾಸ್ಟ್‌ಗಳನ್ನು ಆಲಿಸಿ

ಹುಡುಕಿ

ನಿಮ್ಮ ಆಸಕ್ತಿಯ ವಿಷಯದ ಸುದ್ದಿಗಳಿಗಾಗಿ ನೀವು ಹುಡುಕಬಹುದು

ಹೆಚ್ಚು ಓದಿದವು

ಹೆಚ್ಚು ವೀಕ್ಷಿಸಿದ, ಹೆಚ್ಚು ಡೌನ್‌ಲೋಡ್ ಮಾಡಿದ ಮತ್ತು ಹೆಚ್ಚು ಹಂಚಿದ ಸುದ್ದಿಗಳನ್ನು ಒಂದೇ ಕ್ಲಿಕ್‌ನಲ್ಲಿ ನೋಡಿ

ಡೌನ್‍ಲೋಡ್ ಮಾಡಿ ಹಾಗೂ ಶೇರ್ ಮಾಡಿ

ನಡೌನ್‍ಲೋಡ್ ಮಾಡಿ ಮತ್ತು ನಿಮ್ಮ ಸ್ನೇಹಿತರು ಹಾಗೂ ಕುಟುಂಬಿಕರೊಂದಿಗೆ ಶೇರ್ ಮಾಡಿ

ಸಂಗ್ರಹ

ದಿನಾಂಕ ಆಯ್ಕೆ ಮಾಡಿ ಮತ್ತು ನಿನ್ನೆಯ ಅಥವಾ ಹಳೆಯ ಪತ್ರಿಕೆಯನ್ನು ಓದಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೌದು, ಇ ಪೇಪರ್ ಅನ್ನು ಪಡೆಯಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಇಲ್ಲಿ ಮಾಡಿ:

https://epaper.prajavani.net ಮತ್ತು ನೀಡಿರುವ ಯಾವುದೇ ಚಂದಾದಾರಿಕೆ ಯೋಜನೆಗಳಲ್ಲಿ ಒಂದನ್ನು ಖರೀದಿಸಿ

https://epaper.prajavani.net/subscription-plans

ಚಂದಾದಾರರಾದರೆ ನಿಮ್ಮ ಯೋಜನೆಯ ಆಧಾರದಲ್ಲಿ, ಎಲ್ಲ ವೈಶಿಷ್ಟ್ಯಗಳಿರುವ ಪ್ರಜಾವಾಣಿಯ ಎಲ್ಲ 32 ಆವೃತ್ತಿಗಳು ಹಾಗೂ ಹಿಂದಿನ ಸಂಚಿಕೆಗಳನ್ನು ನೀವು ನೋಡಬಹುದು. ನಮ್ಮಲ್ಲಿ ಮೂರು ಚಂದಾದಾರಿಕೆ ಯೋಜನೆಗಳಿವೆ. ಈ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ: https://epaper.prajavani.net/subscription-plans

ನಿಮ್ಮ ಚಂದಾದಾರಿಕೆಯ ಅವಧಿ ಮುಗಿಯುವ ಮೊದಲೇ ನಾವು ನಿಮಗೆ ರಿಮೈಂಡರ್ ಇಮೇಲ್ ಕಳುಹಿಸುತ್ತೇವೆ. ನಿಮ್ಮ ಚಂದಾದಾರಿಕೆ ಪುಟದಿಂದ ನೀವು ಯಾವಾಗ ಬೇಕಾದರೂ ನಿಮ್ಮ ಚಂದಾದಾರಿಕೆಯ ಅವಧಿಯನ್ನು ಪರಿಶೀಲಿಸಬಹುದು.

ಹೌದು, ಎಲ್ಲಾ ಚಂದಾದಾರಿಕೆಯು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ನಮ್ಮ ಚಂದಾದಾರಿಕೆಯ ಪುಟದಲ್ಲಿ ನೀವು ಯಾವಾಗ ಬೇಕಾದರೂ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು.

ಹೌದು, ಯಾವಾಗ ಬೇಕಿದ್ದರೂ ನೀವು ನಿಮ್ಮ ಚಂದಾದಾರಿಕೆ ಯೋಜನೆಯನ್ನು ಬದಲಿಸಬಹುದು ಮತ್ತು ನಿಮ್ಮ ಹೊಸ ಯೋಜನೆಯು ತಕ್ಷಣದಿಂದಲೇ ಸಕ್ರಿಯಗೊಳ್ಳುತ್ತದೆ. ಈಗಿನ ಯೋಜನೆಯ ಪ್ರಯೋಜನಗಳು ನಿಮಗೆ ಅದರ ಅಂತಿಮ ದಿನಾಂಕದವರೆಗೂ ಲಭ್ಯವಿರುತ್ತವೆ.

"ನನ್ನ ಚಂದಾದಾರಿಕೆ" ಪುಟದಿಂದ ನೀವು ಯಾವಾಗ ಬೇಕಿದ್ದರೂ ನಿಮ್ಮ ಚಂದಾದಾರಿಕೆಯನ್ನು ರದ್ದು ಮಾಡಬಹುದು.

ಪಾಸ್‌ವರ್ಡ್‌ ಅನ್ನು ಪಡೆಯಲು, ಲಾಗಿನ್‌ ಬಟನ್‌ ಕೆಳಗೆ ನೀಡಲಾಗಿರುವ Forgot Password ಲಿಂಕ್‌ ಮೇಲೆ ಒತ್ತಿ. ನಿಮ್ಮ ಪಾಸ್‌ವರ್ಡ್‌ ಬದಲಿಸಲು, ಪರದೆಯ ಬಲ ಬಾಗದಲ್ಲಿ ಕಾಣುವ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಒತ್ತಿ ಮತ್ತು ನಂತರ ಚೇಂಜ್‌ ಪಾಸ್‌ವರ್ಡ್‌ ಆಯ್ಕೆಯ ಮೇಲೆ ಒತ್ತಿ.

ಅಸ್ತಿತ್ವದಲ್ಲಿರುವ ಖಾತೆಯಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ಇಮೇಲ್ ವಿಳಾಸವನ್ನು ಬದಲಿಸಲು, ದಯವಿಟ್ಟು ಹೊಸ ಇಮೇಲ್ ವಿಳಾಸದೊಂದಿಗೆ ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳಿ.

ನೀವು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಪಾವತಿ ವಿಧಾನ ಆಯ್ಕೆ ಮಾಡಿಕೊಳ್ಳಬಹುದು - ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪೇಟಿಎಂ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್. ಅಂತರರಾಷ್ಟ್ರೀಯ ಬಳಕೆದಾರರಿಂದ ನಾವು ಕ್ರೆಡಿಟ್ ಕಾರ್ಡ್ ಮೂಲಕ ಮಾತ್ರ ಪಾವತಿಯನ್ನು ಸ್ವೀಕರಿಸುತ್ತೇವೆ. ಿ

ನೀವು ಯಾವುದೇ ಕ್ಷಣದಲ್ಲಿ ನಿಮ್ಮ ಚಂದಾದಾರಿಕೆ ರದ್ದುಗೊಳಿಸಬಹುದು. ನಮ್ಮಲ್ಲಿ ಯಾವುದೇ ಹಣ ಮರುಪಾವತಿಯ ನೀತಿ ಇಲ್ಲ. ನಿಮ್ಮ ಯೋಜನೆಯ ಮಾನ್ಯತೆಯು ಕೊನೆಗೊಳ್ಳುವವರೆಗೂ ನೀವು ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ನೀವು ಚಂದಾದಾರಿಕೆಯನ್ನು ಖರೀದಿಸಿದ ನಂತರ, ನಿಮ್ಮ ಇ–ಮೇಲ್‌ಗೆ ಸ್ವೀಕೃತಿ ಪತ್ರವನ್ನು ಕಳುಹಿಸಲಾಗುವುದು. ಅದರಲ್ಲಿ ಚಂದಾದಾರಿಕೆ ಪ್ಲಾನ್‌ ಸೇರಿದಂತೆ ಎಲ್ಲಾ ಮಾಹಿತಿ ಇರಲಿದೆ.

ಡೆಸ್ಕ್‌ಟಾಪ್‌ನಿಂದ: ಟೂಲ್ ಬಾರ್‌ನಲ್ಲಿ ಕಾಣಿಸುವ ಲೊಕೇಷನ್ ಐಕಾನ್ ಮತ್ತು ಕ್ಯಾಲೆಂಡರ್ ಐಕಾನ್ ಕ್ಲಿಕ್ ಮಾಡುವ ಮೂಲಕ ಅಗತ್ಯವಿರುವ ಆವೃತ್ತಿ /ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ

ಮೊಬೈಲ್‌ನಲ್ಲಿ: ನಿಮ್ಮ ಪರದೆಯಲ್ಲಿ ಎಡಭಾಗಕ್ಕೆ ಮೇಲೆ ಕಾಣುವ ಮೆನು ಒತ್ತಿ, ಪಟ್ಟಿಯಿಂದ ಅಗತ್ಯವಿರುವ ಆವೃತ್ತಿ/ದಿನಾಂಕ ಆಯ್ಕೆ ಮಾಡಿಕೊಳ್ಳಿ. ಅಲ್ಲದೆ, ಸುದ್ದಿ ಪತ್ರಿಕೆಯ ಚಿತ್ರದ ಕೆಳಗೆ ಕಾಣುವ ಆವೃತ್ತಿ/ದಿನಾಂಕವನ್ನು ಒತ್ತಿ ಆಯ್ಕೆ ಮಾಡಿಕೊಳ್ಳಬಹುದು.

ಲೇಖನವನ್ನು ಬುಕ್‌ಮಾರ್ಕ್ ಮಾಡಲು ಅಥವಾ ಫೇವರಿಟ್ ಆಗಿ ಸೇವ್ ಮಾಡಲು ಟೂಲ್ ಬಾರ್‌ನಲ್ಲಿ ಕಾಣುವ ಫೇವರಿಟ್ ಐಕಾನ್ ಕ್ಲಿಕ್ ಮಾಡಿ. ಬುಕ್‌ಮಾರ್ಕ್ ಮಾಡಿದ/ ಫೇವರಿಟ್ ಲೇಖನಗಳನ್ನು ನೋಡಲು ಪರದೆಯ ಬಲ ಭಾಗದಲ್ಲಿ ಕಾಣುವ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿದ ನಂತರ ಮೈ ಫೇವರಿಟ್ ಆರ್ಟಿಕಲ್ಸ್ ಆಯ್ಕೆ ಕ್ಲಿಕ್ಕಿಸಿ

ಸುದ್ದಿಗಳನ್ನು ಡೌನ್‌ಲೋಡ್ ಮಾಡಲು ನಾವು ಅನುವು ಮಾಡುತ್ತೇವೆ

ಹೌದು. ನೀವು ಶೇರ್ ಮಾಡಬಹುದು

ನೀವು ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೋಡಬಹುದು. ಆದರೆ ಒಂದು ಹೊತ್ತಿನಲ್ಲಿ ಒಂದು ಲಾಗಿನ್‌ ಲಾಗಿನ್ ಮಾತ್ರ ಸಕ್ರಿಯವಾಗಿರುತ್ತದೆ.

ಹೌದು. ಇ-ಪೇಪರ್ ನೋಡಬೇಕಿದ್ದರೆ ನೋಂದಣಿಯಾಗಿರಬೇಕು ಮತ್ತು ಸಕ್ರಿಯ ಚಂದಾದಾರಿಕೆ ಯೋಜನೆ ಇರುವುದು ಅಗತ್ಯ.

https://epaper.prajavani.net ಇಲ್ಲಿ ನೋಂದಾಯಿಸಿಕೊಳ್ಳಿ ಹಾಗೂ https://epaper.prajavani.net/subscription-plans ಎಂಬಲ್ಲಿ ಯಾವುದಾದರೂ ಚಂದಾದಾರಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.

ನಾವು ಕ್ರೆಡಿಟ್‌ ಕಾರ್ಡ್‌ ಮೂಲಕ ಮಾತ್ರ ಪಾವತಿಯನ್ನು ಸ್ವೀಕರಿಸುತ್ತೇವೆ.

Choose payment mode

Credit/Debit Card

All leading Bank credit and debit cards are accepted.

Credit/Debit Card

All leading Bank credit and debit cards are accepted.

Secure Payments By